ಇವತ್ತು ಊಟದ ಸಮಯದಲ್ಲಿ ಹನಿಗವನಗಳು ಹರಿದು ಬರುತಿದ್ದವು.
ಕೆಲವು ಇಂತಿವೆ :
ಸರ್ವಕಾಲಿನ ಸತ್ಯ

ಸರ್ವರೂ ಸರ್ವಕಾಲದಲೂ ಸರ್ವರ್(Server) Access ಬೇಡಿದೊಡೆ,
ಸರ್ವರಿಗೂ ಸರ್ವರ್ ಸಿಗುವುದುಂಟೆ?!
ಇದೇ ಸರ್ವಕಾಲೀನ ಸತ್ಯ ಸರ್ವಜ್ಞ
ಮತ್ತೊಂದು...
ಸೈಕಲ್ಲು

ದಿನವೂ ತುಳಿದರೆ ಸೈಕಲ್ಲು,
ಗಟ್ಟಿಯಾಗುವವು ಕೈ-ಕಾಲು,
ಕಡೆಗಾಲದಲ್ಲಿ ನೀ ಹಿಡಿಯುವುದಿಲ್ಲ ಕೋಲು.
DISCLAIMER: I do not hold any copyright for this image. The usage of image is just for illustration. It shall be removed if there be any objection from the copyright holder.